ಮೊದಲು ಒಂದು ಪಾವು  ಅಕ್ಕಿ 15 ನಿಮಿಷ ನೆನೆಸಿಡಿ.

ಮಸಾಲೆ: 4 ಸ್ಪೂನ್ ತೆಂಗಿನತುರಿ, ಒಂದು ಹಿಡಿ ಕೊತ್ತಂಬರಿ ಸೊಪ್ಪು, ಪುದೀನಾ, ಒಂದು ಸ್ಪೂನ್ ಸೋಂಪು, 3 ಏಲಕ್ಕಿ, 4 ಚಕ್ಕೆ, 4 ಲವಂಗ, 10 ಹಸಿ ಮೆಣಸಿನಕಾಯಿ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ಕುಕ್ಕರ್ ಗೆ  ಅರ್ಧ ಕಪ್ ಎಣ್ಣೆ ಹಾಕಿ ಪಲಾವ್ ಎಲೆ, ಅನಾನಸ್ ಹೂ, ಮೊಗ್ಗು, ಚಕ್ಕೆ,ಲವಂಗ, ಏಲಕ್ಕಿ,  ಸೊಂಪ್, ಎರೆಡು ದೊಡ್ಡ ಈರುಳ್ಳಿ, 2 ಸ್ಪೂನ್ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಸೇರಿಸಿ  ಫ್ರೈ ಮಾಡಿ ಅದಕ್ಕೆ ಟೊಮೇಟೊ, ಅರಿಶಿನ, ಉಪ್ಪು ಸೇರಿಸಿ ಮೆತ್ತಗಾದ ನಂತರ  ಡಬಲ್ ಬೀನ್ಸ್, ಕ್ಯಾರೆಟ್, ಹುರಳಿ ಕಾಯಿ, ನವಿಲು ಕೋಸು, ಹಸಿ ಬಟಾಣಿ, ಕ್ಯಾಪ್ಸಿಕಂ, ಎಲ್ಲವನ್ನು ಸೇರಿಸಿ 5 ನಿಮಿಷ ಫ್ರೈ ಮಾಡಿ ರುಬ್ಬಿದ ಮಸಾಲೆ, 4 ಸ್ಪೂನ್ ಮೊಸರು, 1ಸ್ಪೂನ್ ದನಿಯ ಪುಡಿ, ಗರಂ ಮಸಾಲೆ, ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ 1:2 ನೀರು,ನಿಂಬೆ ರಸ, ಹೆಚ್ಚಿದ ಪುದೀನಾ ಸೊಪ್ಪು ತುಪ್ಪ ಹಾಕಿ 2ವಿಷಲ್ ಕೂಗಿಸಿದರೆ ಡಬಲ್ ಬೀನ್ಸ್ ಪಲಾವ್ ರೆಡಿ.

ಸೌತೆ ಕಾಯಿ ರಾಯತ ಜೊತೆ ಬ್ಯಾಟಿಂಗ್ ಮಾಡಿ.


ಪಲಾವ್ ಪಾಕವಿಧಾನ